ಮುಂಬೈ: ಐಸಿಸಿ ಏಕದಿನ ವಿಶ್ವಕಪ್ 2023 ರ ಮೊದಲ ಸೆಮಿಫೈನಲ್ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.ಇದುವರೆಗೆ ಟೀಂ ಇಂಡಿಯಾ ಎಂಟನೇ ಬಾರಿಗೆ ಏಕದಿನ ವಿಶ್ವಕಪ್ ಸೆಮಿಫೈನಲ್ ಗೇರಿದೆ. ಮೊದಲ ಬಾರಿಗೆ 1983 ರಲ್ಲಿ ಸೆಮಿಫೈನಲ್ ತಲುಪಿದ್ದ ಟೀಂ ಇಂಡಿಯಾ ಆ ವರ್ಷ ಮೊದಲ ವಿಶ್ವಕಪ್ ಗೆದ್ದು ವಿಶ್ವ ಕ್ರಿಕೆಟ್ ನ್ನು ದಂಗುಬಡಿಸಿತ್ತು. ಕಳೆದ ಬಾರಿ 2019 ರ ವಿಶ್ವಕಪ್ ನಲ್ಲೂ ಟೀಂ ಇಂಡಿಯಾ