ಪುಣೆ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಅತಿಥೇಯ ಟೀಂ ಇಂಡಿಯಾ ತನ್ನ ನಾಲ್ಕನೇ ಪಂದ್ಯವಾಡಲಿದೆ. ಭಾರತಕ್ಕೆ ಹಲವು ಬಾರಿ ಅಚ್ಚರಿಯ ಸೋಲು ನೀಡಿರುವ ಬಾಂಗ್ಲಾದೇಶ ವಿರುದ್ಧ ಪಂದ್ಯವಾಡಲಿದೆ.2007 ರ ವಿಶ್ವಕಪ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತ ಬಳಿಕ ಟೀಂ ಇಂಡಿಯಾ ಎಚ್ಚರಿಕೆಯಿಂದಿರಬೇಕಿದೆ. ಅದಾದ ಬಳಿಕ ಇತ್ತೀಚೆಗೆ ಏಷ್ಯಾ ಕಪ್ ನಲ್ಲಿ, ಅದಕ್ಕೆ ಮೊದಲು ನಡೆದಿದ್ದ ಏಕದಿನ ಸರಣಿಯಲ್ಲೂ ಬಾಂಗ್ಲಾದೇಶ ವಿರುದ್ಧ ಸೋಲು ಅನುಭವಿಸಿತ್ತು. ಆದರೆ ಪ್ರಸಕ್ತ ಭಾರತ