ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವೆ ಕೊನೆಯ ಲೀಗ್ ಪಂದ್ಯ ನಡೆಯಲಿದೆ.ಬೆಂಗಳೂರಿನಲ್ಲಿ ಭಾರತ ತಂಡ ಆಡುವುದನ್ನು ನೋಡಲು ಇಲ್ಲಿನ ಅಭಿಮಾನಿಗಳು ಇಷ್ಟು ದಿನದಿಂದ ಕಾಯುತ್ತಿದ್ದಾರೆ. ಇಂದು ಆ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಫಲಿತಾಂಶ ಭಾರತ ಅಥವಾ ನೆದರ್ಲ್ಯಾಂಡ್ಸ್ ಗೆ ಯಾವುದೇ ಪರಿಣಾಮ ಬೀರದು. ಹಾಗಿದ್ದರೂ ಬೆಂಗಳೂರಿನ ಅಭಿಮಾನಿಗಳಿಗೆ ವಿಶೇಷ ಪಂದ್ಯ.ಟೀಂ ಇಂಡಿಯಾ ಈ ಪಂದ್ಯಕ್ಕೆ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.