ಕೋಲ್ಕೊತ್ತಾ: ಈ ಏಕದಿನ ವಿಶ್ವಕಪ್ ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಎರಡು ಪ್ರಬಲ ತಂಡಗಳಾದ ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ಪಂದ್ಯ ನಡೆಯಲಿದೆ.ಟೀಂ ಇಂಡಿಯಾ ಈಗಾಗಲೇ ಏಳಕ್ಕೆ ಏಳು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಗೇರಿದ ಮೊದಲ ತಂಡವೆನಿಸಿಕೊಂಡಿದೆ. ಹಾಗಿದ್ದರೂ ಭಾರತದಂತೆಯೇ ಪ್ರಬಲ ತಂಡವಾಗಿರುವ ಆಫ್ರಿಕಾವನ್ನು ಸೋಲಿಸುವುದು ರೋಹಿತ್ ಪಡೆಯ ಆತ್ಮವಿಶ್ವಾಸ ಹೆಚ್ಚಿಸಲಿದೆ. ರೋಹಿತ್ ಪಡೆ ಇದುವರೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದೆ. ಅದರಲ್ಲೂ ಇಂದು