ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಸತತ ಗೆಲುವಿನಿಂದ ಉಬ್ಬಿಹೋಗಿರುವ ದ.ಆಫ್ರಿಕಾ ದುರ್ಬಲ ಎದುರಾಳಿ ನೆದರ್ಲ್ಯಾಂಡ್ಸ್ ನ್ನು ಎದುರಿಸಲಿದೆ.ದ.ಆಫ್ರಿಕಾ ಇದುವರೆಗೆ ನಡೆದ 2 ಪಂದ್ಯಗಳಲ್ಲಿ ಎರಡನ್ನೂ ಗೆದ್ದುಕೊಂಡಿದೆ. ಅದರಲ್ಲೂ ಕಳೆದ ಪಂದ್ಯದಲ್ಲಿ ದೈತ್ಯ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ಕ್ಲಿಕ್ ಆಗಿದ್ದು ಆಫ್ರಿಕಾಗೆ ಪ್ಲಸ್ ಪಾಯಿಂಟ್.ಇತ್ತ ನೆದರ್ಲ್ಯಾಂಡ್ಸ್ ಇದುವರೆಗೆ ಗೆಲುವು ಕಂಡಿಲ್ಲ. ಆಡಿದ 2 ಪಂದ್ಯಗಳ ಪೈಕಿ ಎರಡರಲ್ಲೂ ಸೋಲು ಕಂಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ