ಮುಂಬೈ: ಶ್ರೀಲಂಕಾ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯವನ್ನು ಭರ್ಜರಿಯಾಗಿ 302 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಸೆಮಿಫೈನಲ್ ಗೇರಿದೆ.ಈ ವಿಶ್ವಕಪ್ ಕೂಟದಲ್ಲಿ ಇದುವರೆಗೆ ಆಡಿದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದ ಟೀಂ ಇಂಡಿಯಾ ಈಗ 14 ಅಂಕ ಸಂಪಾದಿಸಿದ್ದು ಅಗ್ರ ಸ್ಥಾನದಲ್ಲಿದೆ. ಜೊತೆಗೆ ನೆಟ್ ರನ್ ರೇಟ್ ಕೂಡಾ 2.102 ಕ್ಕೇರಿದೆ.ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಗೇರಿದ ಮೊದಲ ತಂಡವೆನಿಸಿಕೊಂಡಿದೆ. ಲೀಗ್ ಹಂತದಲ್ಲಿ ಭಾರತ ಮುಂದಿನ ಪಂದ್ಯವನ್ನು ದ.ಆಫ್ರಿಕಾ