ಭಾರತ ಸರಣಿ ಆಡಲಿರುವ ಬಾಂಗ್ಲಾದೇಶಕ್ಕೆ ಡೇನಿಯಲ್ ವೆಟ್ಟೋರಿ ಕೋಚ್

ಮುಂಬೈ| Krishnaveni K| Last Modified ಭಾನುವಾರ, 27 ಅಕ್ಟೋಬರ್ 2019 (08:57 IST)
ಮುಂಬೈ: ಟೀಂ ಇಂಡಿಯಾ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿ ಆಡಲು ಭಾರತಕ್ಕೆ ಬಂದಿಳಿಯಲಿರುವ ಬಾಂಗ್ಲಾದೇಶ ತಂಡ ಈಗಾಗಲೇ ಅಭ್ಯಾಸ ಶುರು ಮಾಡಿಕೊಂಡಿದೆ.

 
ಇದುವರೆಗೆ ಬಾಂಗ್ಲಾ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಬೌಲಿಂಗ್ ಕೋಚ್ ಆಗಿದ್ದರು. ಆದರೆ ಇದೀಗ ಜೋಶಿ ತಮ್ಮ ಸ್ಥಾನ ತೊರೆದಿದ್ದು, ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ನೂತನ ಬೌಲಿಂಗ್ ಕೋಚ್ ಆಗಿದ್ದಾರೆ.
 
ಭಾರತದಂತಹ ಕಠಿಣ ಸರಣಿಗೆ ಈಗಾಗಲೇ ಬಾಂಗ್ಲಾ ವೆಟ್ಟೋರಿ ನೇತೃತ್ವದಲ್ಲಿ ಅಭ್ಯಾಸ ಶುರು ಮಾಡಿಕೊಂಡಿದೆ. ಇನ್ನು ಬಾಂಗ್ಲಾದ ಸ್ಟಾರ್ ಆಟಗಾರ ತಮೀಮ್ ಇಕ್ಬಾಲ್ ವೈಯಕ್ತಿಕ ಕಾರಣದಿಂದ ಭಾರತ ಪ್ರವಾಸದಿಂದ ಹೊರಬಂದಿದ್ದು, ಅವರ ಸ್ಥಾನಕ್ಕೆ ಇಮ್ರುಲ್ ಕೈಸ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :