ಸಿಡ್ನಿ: ಬಾಲ್ ವಿರೂಪ ಪ್ರಕರಣದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕಿಸಿಕೊಂಡು, ಒಂದು ವರ್ಷ ಕ್ರಿಕೆಟ್ ನಿಂದ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಪತ್ರಿಕಾಗೋಷ್ಟಿಯಲ್ಲಿ ಕಂಬನಿ ಮಿಡಿದು ಕ್ಷಮೆ ಯಾಚಿಸಿದ್ದಾರೆ.ಕ್ಷಮಿಸಿ ಎಲ್ಲರೂ ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದೇವೆ. ಇನ್ಯಾವತ್ತೂ ದೇಶದ ಪರ ಆಡಲ್ಲ ಎಂದು ವಾರ್ನರ್ ಕಣ್ಣೀರು ಸುರಿಸುತ್ತಾ ಕ್ಷಮೆ ಯಾಚಿಸಿದ್ದಾರೆ. ಈ ತಪ್ಪನ್ನು ಜೀವಮಾನ ಪೂರ್ತಿ ಮರೆಯಲ್ಲ ಎಂದು ಅವರು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.ಈ ತಪ್ಪಿನ ಸಂಪೂರ್ಣ ಜವಾಬ್ದಾರಿಯನ್ನು ನಾನು