ಸಿಡ್ನಿ: ಕೊನೆಯ ಟೆಸ್ಟ್ ಪಂದ್ಯವಾಡುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರ ಕಳೆದುಹೋಗಿದ್ದ ಗ್ರೀನ್ ಬ್ಯಾಗೀ ಕ್ಯಾಪ್ ಈಗ ಮರಳಿ ಅವರ ಕೈಸೇರಿದೆ.ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯ ವಾರ್ನರ್ ಪಾಲಿಗೆ ವಿದಾಯ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಭಾಗಿಯಾಗಲು ಸಿಡ್ನಿಗೆ ಪ್ರಯಾಣ ಮಾಡುವಾಗ ವಾರ್ನರ್ ಗ್ರೀನ್ ಕ್ಯಾಪ್ ಕಳೆದುಕೊಂಡಿದ್ದರು.ನನ್ನ ಗ್ರೀನ್ ಬ್ಯಾಗೀ ಕ್ಯಾಪ್ ಕಳೆದುಹೋಗಿದೆ. ಎಲ್ಲಿ ಹುಡುಕಿದರೂ ಸಿಕ್ಕಿಲ್ಲ. ದಯವಿಟ್ಟು ಯಾರಾದರೂ ತೆಗೆದುಕೊಂಡಿದ್ದರೆ ನನಗೆ ಮರಳಿಸಿ. ನಿಮಗೆ ಬೇರೆ ಕ್ಯಾಪ್ ಕೊಡುತ್ತೇನೆ