ನ್ಯೂಜಿಲೆಂಡ್ ಜತೆ ಪ್ರಥಮ ಹಗಲು/ರಾತ್ರಿ ಟೆಸ್ಟ್ ಪಂದ್ಯ

ನವದೆಹಲಿ| guna| Last Updated: ಶುಕ್ರವಾರ, 22 ಏಪ್ರಿಲ್ 2016 (13:16 IST)
ಸ್ಟೇಡಿಯಂನಲ್ಲಿ ಕುಸಿಯುತ್ತಿರುವ ಪ್ರೇಕ್ಷಕರ ಸಂಖ್ಯೆಯನ್ನು ಏರಿಸಲು, ಬಿಸಿಸಿಐ ತನ್ನ ಪ್ರಪ್ರಥಮ ಹಗಲು/ರಾತ್ರಿ ಟೆಸ್ಟ್ ಪಂದ್ಯವನ್ನು ನಸುಗೆಂಪು ಚೆಂಡಿನೊಂದಿಗೆ ನ್ಯೂಜಿಲೆಂಡ್‌ನ ಭಾರತ ಪ್ರವಾಸ ಸಂದರ್ಭದಲ್ಲಿ ಆಡುತ್ತಿದೆ.

ನ್ಯೂಜಿಲೆಂಡ್ ವಿರುದ್ಧ ನಸುಗೆಂಪು ಚೆಂಡಿನೊಂದಿಗೆ ಹಗಲು/ರಾತ್ರಿ ಟೆಸ್ಟ್ ಪಂದ್ಯವಾಡಲು ನಾವು ನಿರ್ಧರಿಸಿದ್ದೇವೆ. ಅದಕ್ಕಿಂತ ಮುಂಚೆ ದುಲೀಪ್ ಟ್ರೋಫಿ ಹಗಲು/ರಾತ್ರಿ ಟೆಸ್ಟ್ ಪಂದ್ಯಕ್ಕೆ ತಾಲೀಮಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಬಿಸಿಸಿಐ ಮುಖ್ಯಕಚೇರಿಯಲ್ಲಿ ಮಾಧ್ಯಮದ ವ್ಯಕ್ತಿಗಳಿಗೆ ತಿಳಿಸಿದರು.


ದುಲೀಪ್ ಟ್ರೋಫಿಯ ಮುಖ್ಯ ಉದ್ದೇಶ ನಸುಗೆಂಪು ಕೂಕಾಬುರಾ ಚೆಂಡು ಉಪಖಂಡೀಯ ಪರಿಸ್ಥಿತಿಯಲ್ಲಿ ಹೇಗೆ ವರ್ತಿಸುತ್ತದೆ ಎಂದು ಪರೀಕ್ಷಿಸುವುದಾಗಿದೆ ಎಂದು ಠಾಕುರ್ ಹೇಳಿದರು.

ಎಲ್ಲಾ ಪ್ರಮುಖ ಭಾರತೀಯ ಆಟಗಾರರು ದುಲೀಪ್ ಟ್ರೋಫಿಯಲ್ಲಿ ಆಡುತ್ತಾರೆಂದು ನಿರೀಕ್ಷಿಸುವುದಾಗಿ ಠಾಕುರ್ ಹೇಳಿದರು. ಟೆಸ್ಟ್ ಪಂದ್ಯಕ್ಕೆ ಮುನ್ನ ಮಂಡಳಿಗೆ ಅವರು ಮಾಹಿತಿ ನೀಡಲು ಅವರಿಗೆ ನೆರವಾಗುತ್ತದೆ ಎಂದು ಹೇಳಿದರು. ಭಾರತದಲ್ಲಿ ಟೆಸ್ಟ್ ಪಂದ್ಯಗಳನ್ನು ಎಸ್‌ಜಿ ಟೆಸ್ಟ್ ಚೆಂಡುಗಳಲ್ಲಿ ಆಡುತ್ತಿರುವುದಾಗಿ ಠಾಕುರ್ ಹೇಳಿದ್ದು, ಮುಂಬರುವ ಪಂದ್ಯದಲ್ಲಿ ನಸುಗೆಂಪು ಕೂಕಬುರಾವನ್ನು ಬಳಸಲಾಗುವುದು ಎಂದು ಠಾಕುರ್ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :