ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಿಗೆ ಹೆಚ್ಚು ಮಹತ್ವ ನೀಡುವುದನ್ನು ಬೆಂಬಲಿಸಿದ ನ್ಯೂಜಿಲೆಂಡ್ ಕ್ರಿಕೆಟ್ ಲೆಜೆಂಡ್ ರಿಚರ್ಡ್ ಹ್ಯಾಡ್ಲಿ ಇದು ಆಟದ ಭವಿಷ್ಯಕ್ಕೆ ಅನುಕೂಲವಾಗಿದ್ದು ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುವುದಲ್ಲದೇ ಟೆಲಿವಿಷನ್ ವೀಕ್ಷಣೆಗೆ ಕೂಡ ಸೂಕ್ತವಾಗಿದೆ ಎಂದಿದ್ದಾರೆ. ಹಗಲು ರಾತ್ರಿ ಪಂದ್ಯವು ಕ್ರೀಡೆಯ ಭವಿಷ್ಯವಾಗಿದೆ. ಅಡೆಲೈಡ್ ಓವಲ್ನಲ್ಲಿ ನ್ಯೂಜಿಲೆಂಡ್ ಆಸ್ಟ್ರೇಲಿಯಾ ವಿರುದ್ಧ ಆಡಿದಾಗ ಇದೊಂದು ಅದ್ಭುತ ನೋಟವಾಗಿತ್ತು. ನಿಜವಾಗಲೂ ಇದು ನೆರೆದ ಗುಂಪನ್ನು ಆಕರ್ಷಿಸಿದ್ದು, ಟಿವಿ ವೀಕ್ಷಣೆಗೆ ಕೂಡ ಸೂಕ್ತವಾಗಿತ್ತು ಎಂದು ರಿಚರ್ಡ್