ನವದೆಹಲಿ: ವೆಸ್ಟ್ ಇಂಡೀಸ್ ನಲ್ಲಿ ಕ್ರಿಕೆಟ್ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಉಗ್ರ ದಾಳಿಯಾಗುವ ಕುರಿತಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಈಮೇಲ್ ಒಂದು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.ಪಾಕ್ ಕ್ರಿಕೆಟ್ ಮಂಡಳಿಯ ಈಮೇಲ್ ಗೆ ಅನಾಮಿಕ ಪತ್ರವೊಂದು ಬಂದಿದ್ದು, ವಿಂಡೀಸ್ ನಲ್ಲಿರುವ ಭಾರತೀಯ ಕ್ರಿಕೆಟಿಗರ ಮೇಲೆ ಯಾವುದೇ ಕ್ಷಣದಲ್ಲೂ ದಾಳಿಯಾಗಬಹುದು ಎಂದು ಬರೆಯಲಾಗಿದೆ. ಆದರೆ ಯಾವುದೇ ಉಗ್ರ ಸಂಘಟನೆಯ ಹೆಸರು ಇದರಲ್ಲಿ ಉಲ್ಲೇಖವಾಗಿಲ್ಲ. ಇದನ್ನು ತಕ್ಷಣವೇ ಪಾಕ್