ಟೀಂ ಇಂಡಿಯಾದಲ್ಲಿ ಮತ್ತೊಬ್ಬ ಗಾಯಾಳು

ಮುಂಬೈ| Krishnaveni K| Last Modified ಶುಕ್ರವಾರ, 20 ಡಿಸೆಂಬರ್ 2019 (08:33 IST)
ಮುಂಬೈ: ಶಿಖರ್ ಧವನ್, ಭುವನೇಶ್ವರ್ ಕುಮಾರ್ ನಂತರ ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗ ಗಾಯಾಳುವಾಗಿ ವೆಸ್ಟ್ ಇಂಡೀಸ್ ಸರಣಿಯಿಂದ ಹೊರಬಿದ್ದಿದ್ದಾರೆ.

 
ದೀಪಕ್ ಚಹರ್ ಈಗ ಗಾಯಾಳು ಲಿಸ್ಟ್ ಗೆ ಹೊಸ ಸೇರ್ಪಡೆಯಾಗಿದ್ದಾರೆ. ದ್ವಿತೀಯ ಏಕದಿನ ಪಂದ್ಯದಲ್ಲಿ ಸೊಂಟ ನೋವಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ.
 
ದೀಪಕ್ ಸ್ಥಾನಕ್ಕೆ ಮತ್ತೊಬ್ಬ ವೇಗಿ ನವದೀಪ್ ಸೈನಿ ಆಯ್ಕೆಯಾಗಿದ್ದಾರೆ. ದೀಪಕ್ ಗಾಯ ಸಣ್ಣ ಮಟ್ಟಿನದ್ದಾರೂ ಭವಿಷ್ಯದ ದೃಷ್ಟಿಯಿಂದ ದೀಪಕ್ ಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :