ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಬೌಲರ್ ದೀಪ್ತಿ ಶರ್ಮಾ ಮಂಕಡ್ ಔಟ್ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.ನಿಯಮದ ಪ್ರಕಾರ ಇದು ತಪ್ಪಲ್ಲದೇ ಹೋದರೂ ಕ್ರೀಡಾ ಸ್ಪೂರ್ತಿಯ ದೃಷ್ಟಿಯಿಂದ ಇದು ಸರಿಯಲ್ಲ ಎಂದು ಇಂಗ್ಲೆಂಡ್ ಸಮರ್ಥಕರು ಕಿಡಿ ಕಾರಿದ್ದರು.ಈ ಬಗ್ಗೆ ಇದೀಗ ಸ್ವತಃ ದೀಪ್ತಿ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ‘ಚಾರ್ಲೆಟ್ ಡೀನ್ ಪದೇ ಪದೇ ಬಾಲ್ ಎಸೆಯುವ ಮೊದಲೇ ಕ್ರೀಸ್ ಬಿಡುತ್ತಿದ್ದರು. ಆಕೆಗೂ ನಾವು ಇದರ