ನವದೆಹಲಿ: ವಿದರ್ಭ ತಂಡದ ಎದುರು ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ಸೋತು, ನವದೆಹಲಿಗೆ ಮರಳುವ ಮಾರ್ಗ ಮಧ್ಯದಲ್ಲಿ ದೆಹಲಿ ಕ್ರಿಕೆಟಿಗರಿಗೆ ಪ್ರಾಣಾಪಾಯ ಎದುರಾಗಿದೆ! ಇಂದೋರ್ ನಿಂದ ದೆಹಲಿಗೆ ಪ್ರಯಾಣಿಸಲು ಇಂಡಿಗೋ ವಿಮಾನ ಏರಿದ್ದ ಕ್ರಿಕೆಟಿಗರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಇವರು ಪ್ರಯಾಣಿಸುತ್ತಿದ್ದ ವಿಮಾನ ಟೇಕ್ ಆಫ್ ಆದ ಬಳಿಕ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತಕ್ಷಣವೇ ಪೈಲಟ್ ವಿಮಾನ ಮರಳಿ ರನ್ ವೇನತ್ತ ಚಲಾಯಿಸಿದ್ದಾರೆ.ಹೀಗಾಗಿ ಕೂದಲೆಳೆಯಲ್ಲಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು