ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್-ಧನಶ್ರೀ ವರ್ಮಾ ಪರಸ್ಪರ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಇದೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು.ಇದೀಗ ಧನಶ್ರೀ ವರ್ಮ ತಮ್ಮ ಜೀವನದಲ್ಲಿ ನಡೆದಿರುವ ನೋವಿನ ವಿಚಾರವೇನೆಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.‘ಕೆಲವು ದಿನಗಳ ಹಿಂದೆ ಡ್ಯಾನ್ಸ್ ಮಾಡುವಾಗ ಬಿದ್ದು ಮಂಡಿಗೆ ಏಟು ಮಾಡಿಕೊಂಡಿದ್ದೆ. ಹೀಗಾಗಿ ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಬೇಕಾಯಿತು. ಈ ನಡುವೆ ನಮ್ಮ ವೈವಾಹಿಕ