ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತ ಊಟದ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದೆ. ಆರಂಭದಲ್ಲೇ ದಿಲ್ರುವಾನ್ ರಿಂದ ಜೀವದಾನ ಪಡೆದರೂ ಅದನ್ನು ಬಳಸಿಕೊಳ್ಳದ ಶಿಖರ್ ಧವನ್ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದಿಲ್ರುವಾನ್ ಗೆ ಇದು 100 ನೇ ಟೆಸ್ಟ್ ವಿಕೆಟ್ ಆಗಿತ್ತು.