ಮುಂಬೈ: ಮುಂಬರುವ ವಿಶ್ವಕಪ್ ದೃಷ್ಟಿಯಿಂದ ವೇಗಿಗಲು ಐಪಿಎಲ್ ನಿಂದ ಹೊರಗುಳಿಯುವುದೇ ಒಳ್ಳೆಯದು ಎಂಬ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯವನ್ನು ಧೋನಿ ತಳ್ಳಿಹಾಕಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಧೋನಿ ಕೊಹ್ಲಿ ಅಭಿಪ್ರಾಯಕ್ಕೆ ತದ್ವಿವಿರುದ್ಧವಾಗಿ ಮಾತನಾಡಿದ್ದಾರೆ. ಐಪಿಎಲ್ ನಿಂದ ವೇಗಿಗಳು ಸುಸ್ತಾಗಬಹುದು, ಗಾಯಕ್ಕೊಳಗಾಗಬಹುದು ಇದರಿಂದ ನಂತರ ಬರಲಿರುವ ಏಕದಿನ ವಿಶ್ವಕಪ್ ಆಡಲು ಸಾಧ್ಯವಾಗದೇ ಇರಬಹುದು ಎಂಬ ಕೊಹ್ಲಿ ಅಭಿಪ್ರಾಯಕ್ಕೆ ವಿರುದ್ಧವಾಗಿ ಧೋನಿ ಅಭಿಪ್ರಾಯಪಟ್ಟಿದ್ದಾರೆ.ಐಪಿಎಲ್ ಎನ್ನುವುದು ಬೌಲರ್ ಗಳಿಗೆ ಮುಂಬರುವ ವಿಶ್ವಕಪ್ ಗೆ ತಯಾರಾಗಲು