ನವದೆಹಲಿ: ಐಪಿಎಲ್ ಫೈನಲ್ ಮತ್ತು ಧೋನಿಗೆ ಬಿಡಲಾರದ ನಂಟು ಇರಬೇಕು. ಅದಕ್ಕೇ ಇದುವರೆಗೆ ನಡೆದ 11 ಆವೃತ್ತಿಗಳ ಪೈಕಿ ಧೋನಿ 8 ಫೈನಲ್ ಗಳಲ್ಲಿ ಆಡಿದ್ದಾರೆ!ಒಬ್ಬ ಆಟಗಾರನಿಗೆ ಇದು ದೊಡ್ಡ ದಾಖಲೆಯೇ ಸರಿ. ಅಂತೂ ಐಪಿಎಲ್ ಪ್ರಿಯರಿಗಂತೂ ಧೋನಿ ಇಲ್ಲದೇ ಐಪಿಎಲ್ ಫೈನಲ್ ಇಲ್ಲ ಎನ್ನುವಂತಹ ಸ್ಥಿತಿ. ಇಂದು ಈ ಆವೃತ್ತಿಯ ಐಪಿಎಲ್ ಫೈನಲ್ ನಡೆಯಲಿದ್ದು, ಮತ್ತೆ ಧೋನಿ ನೇತೃತ್ವದ ಸಿಎಸ್ ಕೆ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎದುರಾಗಲಿದೆ.