ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ತಮ್ಮ ವೃತ್ತಿ ಜೀವನದ ಬಗ್ಗೆ ಮಹತ್ವದ ಸುಳಿವೊಂದನ್ನು ನೀಡಿದ್ದಾರೆ.41 ವರ್ಷದ ಧೋನಿ ಐಪಿಎಲ್ ನಲ್ಲಿ ತಂಡವೊಂದನ್ನು ಮುನ್ನಡೆಸುತ್ತಿರುವ ಅತಿ ಹಿರಿಯ ಆಟಗಾರ. ಸಿಎಸ್ ಕೆಯ ಮೊದಲ ಆವೃತ್ತಿಯಿಂದ ಇಲ್ಲಿಯವರೆಗೆ ಧೋನಿಯೇ ನಾಯಕರಾಗಿದ್ದರು.ಇದೀಗ ಧೋನಿಗೆ ಇದೇ ಕೊನೆಯ ಐಪಿಎಲ್ ಆಗಿರಬಹುದು ಎಂಬ ಮಾತು ಕೇಳಿಬರುತ್ತಿದೆ. ಅದರ ನಡುವೆಯೇ ಧೋನಿ ಮಹತ್ವದ ಹೇಳಿಕೆ ನೀಡಿದ್ದು, ನಾನು ನನ್ನ ವೃತ್ತಿ ಜೀವನದ ಕೊನೆಯ ಭಾಗದಲ್ಲಿದ್ದೇನೆ ಎಂದಿದ್ದಾರೆ.