ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ ಧೋನಿ!

ಪುಣೆ, ಮಂಗಳವಾರ, 22 ಮೇ 2018 (09:32 IST)

ಪುಣೆ: ಚೆನ್ನೈ ಸೂಪರ್ ಕಿಂಗ್ಸ್  ಐಪಿಎಲ್ ತಂಡವೆಂದರೆ ಮೊದಲು ನೆನಪಾಗುವ ಹೆಸರೇ ಧೋನಿ. ಧೋನಿಯಿಲ್ಲದೇ ಸಿಎಸ್ ಕೆ ತಂಡವನ್ನು ಊಹಿಸಿಕೊಳ್ಳಲೂ ಅಸಾಧ್ಯ. ಆದರೆ ಇನ್ನು ಮುಂದಿನ ವರ್ಷದಿಂದ ನೀವು ಹಾಗೆ ಮಾಡಲೇಬೇಕಾಗಬಹುದು!

ಈ ಐಪಿಎಲ್ ಆವೃತ್ತಿಯ ಪ್ಲೇ ಆಫ್ ಪಂದ್ಯದಲ್ಲಿ ಇಂದು ಚೆನ್ನೈ ತಂಡ ಹೈದರಾಬಾದ್ ಸನ್ ರೈಸರ್ಸ್ ತಂಡವನ್ನು ಎದುರಿಸಲಿದ್ದು, ಈ ಮಹತ್ವದ ಪಂದ್ಯಕ್ಕೂ ಮೊದಲು ಧೋನಿ ಅಭಿಮಾನಿಗಳಿಗೆ ನಿವೃತ್ತಿಯ ಶಾಕ್ ನೀಡಿದ್ದಾರೆ.

ತಾವೂ ಸೇರಿದಂತೆ ಕೆಲವು ಹಿರಿಯ ಆಟಗಾರರು ಬಹುಶಃ ಮುಂದಿನ ವರ್ಷದಿಂದ ಐಪಿಎಲ್ ಆಡುವುದು ಅನುಮಾನ  ಎಂದು ಧೋನಿ ಹೇಳಿದ್ದಾರೆ. ಜತೆಗೆ ಸುದ್ದಿಗೋಷ್ಠಿಯಲ್ಲಿ ಚೆನ್ನೈ ತಂಡದೊಂದಿಗಿನ ತಮ್ಮ 10 ವರ್ಷಗಳ ಪಯಣವನ್ನು ಮೆಲುಕು ಹಾಕಿದ್ದಾರೆ. ಹೀಗಾಗಿ ಈ ಐಪಿಎಲ್ ಧೋನಿ ಪಾಲಿಗೆ ಕೊನೆಯ ಐಪಿಎಲ್ ಆಗುವುದು ಬಹುತೇಕ ಖಚಿತವಾಗಿದೆ. ಈ ಐಪಿಎಲ್ ನಲ್ಲಿ ಗೆಲುವಿನೊಂದಿಗೆ ವಿದಾಯ ಹೇಳುವುದು ಧೋನಿ ಕನಸು. ಆದರೆ ಧೋನಿ ಅಭಿಮಾನಿಗಳಿಗಂತೂ ಇದು ನಿಜಕ್ಕೂ ಶಾಕಿಂಗ್ ನ್ಯೂಸ್!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಬೇಡದ ದಾಖಲೆಯೊಂದಿಗೆ ಐಪಿಎಲ್ ಗೆ ಮಂಗಳ ಹಾಡಿದ ರೋಹಿತ್ ಶರ್ಮಾ

ಮುಂಬೈ: ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಐಪಿಎಲ್ ಆವೃತ್ತಿಯನ್ನು ನಿರಾಶಾದಾಯಕವಾಗಿ ...

news

ಹಮ್ಮು ಬಿಮ್ಮು ಬಿಟ್ಟು ಹೊಸ ನಾಯಕನಿಗೆ ವಿರಾಟ್ ಕೊಹ್ಲಿ ಈಗ ಸಲಾಮು ಹೊಡೆಯಲೇ ಬೇಕು!

ಮುಂಬೈ: ಟೀಂ ಇಂಡಿಯಾ ಅಫ್ಘಾನಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯ ಆಡುವಾಗ ನಾಯಕ ವಿರಾಟ್ ಕೊಹ್ಲಿ ದೂರದ ...

news

ಐಪಿಎಲ್: ಇಂದಿನಿಂದ ಐಪಿಎಲ್ ಗೆ ಬೇರೆಯದೇ ಖದರ್!

ಮುಂಬೈ: ಈ ಐಪಿಎಲ್ ಆವೃತ್ತಿಯ ಪ್ಲೇ ಆಫ್ ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು, ಕ್ರಿಕೆಟ್ ಪ್ರಿಯರು ...

news

ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ನಾಯಕ, ಆದರೆ ಕೊಹ್ಲಿಗೆ ಕ್ಯಾಪ್ಟನ್ ಯಾರು ಗೊತ್ತಾ?!

ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿಯೇ ನಾಯಕ. ಧೋನಿ ನಂತರ ಅವರೇ ಸಕ್ಸಸ್ ಫುಲ್ ...