Widgets Magazine

ಅಭ್ಯಾಸ ಮಾಡುವಾಗ ಕೈಗೆ ಪೆಟ್ಟು ಮಾಡಿಕೊಂಡ ಧೋನಿ

ಹೈದರಾಬಾದ್| Krishnaveni K| Last Modified ಶನಿವಾರ, 2 ಮಾರ್ಚ್ 2019 (09:26 IST)
ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಸೋತಿರುವ ಟೀಂ ಇಂಡಿಯಾಗೆ ಈಗ ಏಕದಿನ ಸರಣಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಇದೇ ಸಂದರ್ಭದಲ್ಲಿ ಪ್ರಮುಖ ಆಟಗಾರ ಧೋನಿ ಗಾಯದ ಅಪಾಯಕ್ಕೊಳಗಾಗಿದ್ದಾರೆ.

 
ಹೈದರಾಬಾದ್ ನಲ್ಲಿ ಅಭ್ಯಾಸ ನಡೆಸುತ್ತಿರುವ ಟೀಂ ಇಂಡಿಯಾ ಆಟಗಾರರು ಏಕದಿನ ಗೆಲ್ಲಲು ಶತಪ್ರಯತ್ನ ನಡೆಸಿದ್ದಾರೆ. ಈ ನಡುವೆ ಅಭ್ಯಾಸ ನಡೆಸುತ್ತಿದ್ದ ಧೋನಿ ಕೈಗೆ ಪೆಟ್ಟುಮಾಡಿಕೊಂಡಿದ್ದಾರೆ.
 
ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ಧೋನಿ ಮುಂಗೈಗೆ ಬಾಲ್ ತಗುಲಿದೆ. ಘಟನೆ ಬಳಿಕ ಧೋನಿ ಅಭ್ಯಾಸ ಮೊಟಕುಗೊಳಿಸಿದ್ದಾರೆ. ಅವರ ಈ ಗಾಯ ಗಂಭೀರವಾದರೆ ಇಂದು ನಡೆಯಲಿರುವ ಮೊದಲ ಏಕದಿನಕ್ಕೆ ಗೈರಾಗುವ ಸಾಧ್ಯತೆಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :