ಮೆಲ್ಬೋರ್ನ್: ಹಿಂದೊಮ್ಮೆ ಧೋನಿ ಪಂದ್ಯ ಮುಗಿದ ಬಳಿಕ ಅಂಪಾಯರ್ ಬಳಿಯಿಂದ ಬಾಲ್ ಪಡೆದುಕೊಂಡಿದ್ದಕ್ಕೆ ಅವರು ನಿವೃತ್ತಿಯಾಗುತ್ತಾರೆಂದು ಸುದ್ದಿಯಾಗಿದ್ದು ಎಲ್ಲರಿಗೂ ನೆನಪಿರಬಹುದು.ಕೊನೆಗೆ ಕೋಚ್ ರವಿಶಾಸ್ತ್ರಿ ಧೋನಿ ನಿವೃತ್ತಿಯಾಗುತ್ತಿಲ್ಲ, ಬೌಲಿಂಗ್ ಕೋಚ್ ಭರತ್ ಅರುಣ್ ಗೆ ನೆರವಾಗಲು ಮ್ಯಾಚ್ ಬಾಲ್ ಪಡೆದಿದ್ದರಷ್ಟೇ ಎಂದು ಸ್ಪಷ್ಟನೆ ಕೊಡಬೇಕಾಗಿ ಬಂತು. ಇದೀಗ ಮತ್ತೆ ಆಸ್ಟ್ರೇಲಿಯಾ ವಿರುದ್ಧ ತೃತೀಯ ಪಂದ್ಯ ಮುಗಿದ ಬಳಿಕ ಧೋನಿ ಬಾಲ್ ಪಡೆದು ತಕ್ಷಣ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಗೆ ಬಾಲ್