ದುಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮೆಂಟರ್ ಆಗಿರುವ ಧೋನಿ ಕೀಪರ್ ರಿಷಬ್ ಪಂತ್ ಗೆ ಕೀಪಿಂಗ್ ಪಾಠ ಹೇಳಿಕೊಡುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರಿಷಬ್ ಆಡಿರಲಿಲ್ಲ. ಆದರೆ ಈ ಸಮಯವನ್ನು ಹಾಳು ಮಾಡಿಕೊಳ್ಳದೇ ಧೋನಿ ಬೌಂಡರಿ ಗೆರೆ ಬಳಿಯೇ ಸ್ಟಂಪ್ಸ್ ಇಟ್ಟು ರಿಷಬ್ ಗೆ ಕೀಪಿಂಗ್ ಪಾಠ ಮಾಡಿದ್ದಾರೆ.ಇದಕ್ಕೂ ಮೊದಲು ಇಶಾನ್ ಕಿಶನ್ ಗೂ ಧೋನಿ ಕೀಪಿಂಗ್ ಕ್ಲಾಸ್ ಮಾಡಿದ್ದರು.