ನವದೆಹಲಿ: ಈ ಐಪಿಎಲ್ ಕೂಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರೂ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಈ ಬಗ್ಗೆ ಧೋನಿ ಹೇಳಿದ್ದೇನು ಗೊತ್ತಾ?ಮಾಧ್ಯಮ ಗೋಷ್ಠಿಯಲ್ಲಿ ಪತ್ರಕರ್ತರು ಧೋನಿಗೆ ಇದೇ ಪ್ರಶ್ನೆ ಕೇಳಿದ್ದರು. ಅದಕ್ಕೆ ಧೋನಿ ನನ್ನ ಮನೆಯಲ್ಲಿ ಹಲವು ಕಾರು ಮತ್ತು ಬೈಕ್ ಗಳಿವೆ. ಹಾಗಂತ ಅವೆಲ್ಲವನ್ನೂ ನಾನು ಒಂದೇ ಬಾರಿ ಬಳಸುವುದಿಲ್ಲ. ಹಾಗೆಯೇ ನನ್ನ ತಂಡದಲ್ಲಿ ಆರರಿಂದ ಏಳು ಸ್ಪೆಷಲ್ ಬೌಲರ್ ಗಳಿದ್ದಾರೆ.