ಮುಂಬೈ: ಧೋನಿ ಎಂದರೆ ಟೀಂ ಇಂಡಿಯಾದ ಯುವ ಕ್ರಿಕೆಟಿಗರಿಗೆಲ್ಲಾ ಆದರ್ಶ, ಹಾಗೇ ದೊಡ್ಡಣ್ಣನ ಹಾಗೆ. ಆದರೆ ಯುವ ಕ್ರಿಕೆಟಿಗರು ತಮಗೆ ನೀಡುವ ಅತಿಯಾದ ಗೌರವ ಧೋನಿಗೆ ಮುಜುಗರವುಂಟು ಮಾಡುತ್ತದಂತೆ.ಅಂತಹವರಲ್ಲಿ ಯಜುವೇಂದ್ರ ಚಾಹಲ್ ಒಬ್ಬರು. ಯುವ ಸ್ಪಿನ್ನರ್ ಆಗಾಗ ತಮ್ಮ ಯಶಸ್ಸಿಗೆ ಧೋನಿ ಕಾರಣ ಎಂದು ಕ್ರೆಡಿಟ್ ಕೊಡುತ್ತಾರೆ. ಆದರೆ ತಾವು ಮೊದಲ ಬಾರಿಗೆ ಧೋನಿಯನ್ನು ಭೇಟಿಯಾದಾಗ ಅವರು ಹೇಳಿದ ಮಾತೊಂದನ್ನು ಚಾಹಲ್ ಇಂದಿಗೂ ನೆನಪಿಸಿಕೊಳ್ಳುತ್ತಾರೆ.ಮೊದಲ ಬಾರಿಗೆ ಜಿಂಬಾಬ್ವೆ ಸರಣಿಗೆ ಆಯ್ಕೆಯಾದಾಗ