ದುಬೈ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನವಿತ್ತ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿಗೆ ಐಸಿಸಿ ವಿಶೇಷ ಗೌರವ ನೀಡಿದೆ.ತನ್ನ ಟ್ವಿಟರ್ ಪೇಜ್ ನ ಕವರ್ ಫೋಟೋವಾಗಿ ಧೋನಿ ಚಿತ್ರ ಬಳಸಿಕೊಂಡು ಗೌರವ ಸಲ್ಲಿಸಿದೆ. ಐಸಿಸಿ ನೀಡಿದ ಗೌರವ ನೋಡಿ ಅಭಿಮಾನಿಗಳು ಖುಷಿಯಾಗಿ ಕಾಮೆಂಟ್ ಮಾಡಿದ್ದಾರೆ.ಇದುವರೆಗಿನ ಅದ್ಭುತ ಫೋಟೋ ಎಂದು ಕೆಲವರು ಬಣ್ಣಿಸಿದರೆ ಇನ್ನು ಕೆಲವರು ಐಸಿಸಿಗೆ ಧೋನಿ ಚಿತ್ರ ಬಳಸಿದ್ದಕ್ಕೆ ಅಭಿನಂದಿಸಿದ್ದಾರೆ. ಧೋನಿ ಪ್ರತಿನಿಧಿಸುವ