ಮೆಲ್ಬೋರ್ನ್: ಪಂದ್ಯ ಡೋಲಾಯಮಾನ ಸ್ಥಿತಿಯಲ್ಲಿದ್ದಾಗ ಒಮ್ಮೆ ಜೀವದಾನ ಪಡೆದ ಮೇಲೆ ಮರು ಬಾಲ್ ಎದುರಿಸುವಾಗ ಯಾರೇ ಆದರೂ ವಿಚಲಿತರಾಗುವುದು ಸಹಜ. ಆದರೆ ಧೋನಿ ತಾವೇಕೆ ಮಿಸ್ಟರ್ ಕೂಲ್ ಎಂಬುದನ್ನು ಆಸೀಸ್ ವಿರುದ್ಧ ತೃತೀಯ ಏಕದಿನ ಪಂದ್ಯದಲ್ಲಿ ನಿರೂಪಿಸಿಬಿಟ್ಟಿದ್ದಾರೆ.ಆಸ್ಟ್ರೇಲಿಯಾದಂತೇ ಟೀಂ ಇಂಡಿಯಾ ಕೂಡಾ ತೀರಾ ನಿಧಾನಗತಿಯ ಚೇಸಿಂಗ್ ಮಾಡಿತ್ತು. ಕೇವಲ 230 ರನ್ ಗುರಿ ಬೆನ್ನಟ್ಟಲು ಟೀಂ ಇಂಡಿಯಾ ಅಂತಿಮ ಕ್ಷಣದವರೆಗೂ ಹೋರಾಡಿತು. ವಿಕೆಟ್ ಬಿದ್ದಿದ್ದು ಕೇವಲ 3. ಹಾಗಿದ್ದರೂ ಬ್ಯಾಟ್ಸ್