ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದ್ದು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ನಿರೀಕ್ಷೆಯಂತೇ ಇಶಾನ್ ಕಿಶನ್ ಗೆ ಕೊಕ್ ನೀಡಲಾಗಿದೆ. ಗಾಯಗೊಂಡಿರುವ ಮೊಹಮ್ಮದ್ ಶಮಿ ಕೂಡಾ ತಂಡದಿಂದ ಹೊರಗುಳಿದಿದ್ದಾರೆ. ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್, ಕೆ.ಎಸ್. ಭರತ್ ಜೊತೆಗೆ ಹೊಸ ಪ್ರತಿಭೆ ಧ್ರುವ ಜ್ಯುರೆಲ್ ಗೆ ಅವಕಾಶ ನೀಡಲಾಗಿದೆ.ಕೆ.ಎಸ್. ಭರತ್ ಗೆ ಕಳೆದ ಆಫ್ರಿಕಾ ಸರಣಿಯಲ್ಲೂ ಕೊನೆಯ ಕ್ಷಣದಲ್ಲಿ ಅವಕಾಶ ನೀಡಲಾಗಿತ್ತಾದರೂ ಕೆಎಲ್ ರಾಹುಲ್ ಅವರೇ ವಿಕೆಟ್ ಕೀಪರ್ ಜವಾಬ್ಧಾರಿ ನಿಭಾಯಿಸಿದ್ದರು.