ಲಂಡನ್: ಅದ್ಯಾಕೋ ಪ್ರತೀ ಬಾರಿ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಸವಾರಿ ಮಾಡುವ ಟೀಂ ಇಂಡಿಯಾ ನಿನ್ನೆಯ ಫೈನಲ್ ಪಂದ್ಯದ ಸೋಲಿನೊಂದಿಗೆ ಎರಡನೇ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆ ದೇಶದ ವಿರುದ್ಧ ಸೋಲುಂಡಿದೆ. ಆದರೆ ಈ ಸೋಲಿನ ಸುಳಿವು ಭಾರತಕ್ಕೆ ಮೊದಲೇ ಸಿಕ್ಕಿತ್ತಾ? ಪಾಕ್ ಟೂರ್ನಿಯಲ್ಲಿ ಎದ್ದು ಬಂದ ರೀತಿಯಿಂದಲೇ ಟೀಂ ಇಂಡಿಯಾ ಫೈನಲ್ ಪಂದ್ಯದ ವೇಳೆಗೆ ಒತ್ತಡಕ್ಕೆ ಸಿಲುಕಿತ್ತಾ? ಹಾಗೊಂದು ಸಂಶಯ ಕಾಡುತ್ತಿದೆ.ಪಂದ್ಯಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗಲೇ