ಮುಂಬೈ: ಭಾರತ ಮತ್ತು ಚೀನಾ ನಡುವೆ ವೈರತ್ವ ಹೆಚ್ಚಾಗಿರುವ ಹಿನ್ನಲೆಯಲ್ಲಿ ದೇಶದಲ್ಲಿ ಸರ್ಕಾರವೇ ಚೀನಾ ಮೂಲದ ಕಂಪನಿಗಳ ಒಪ್ಪಂದ ಮುರಿಯುವ ಮೂಲಕ ಆರ್ಥಿಕ ಹೊಡೆತ ನೀಡಲು ಮುಂದಾಗಿದೆ. ಅದೇ ಹಾದಿಯಲ್ಲಿ ಬಿಸಿಸಿಐ ಕೂಡಾ ತನ್ನ ಚೀನಾ ಮೂಲದ ಕಂಪನಿಗಳ ಪ್ರಾಯೋಜಕತ್ವ ಮುರಿಯಲು ಹೊರಟಿದೆ. ಆದರೆ ಅದು ಅಷ್ಟು ಸುಲಭವಲ್ಲ. ಯಾಕೆಂದರೆ ಚೀನಾ ಮೂಲದ ಕಂಪನಿಗಳು ಭಾರತೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ. ಬೈಜುಸ್, ವಿವೋ, ಪೇಟಿಎಂ ಸೇರಿದಂತೆ ಬಿಸಿಸಿಐ