ಬಿಸಿಸಿಐ ಮುಂದೆ ಕ್ಷಮೆಯಾಚಿಸಿದ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್

ಮುಂಬೈ, ಸೋಮವಾರ, 9 ಸೆಪ್ಟಂಬರ್ 2019 (09:50 IST)

ಮುಂಬೈ: ಕೆರೆಬಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಲೀಗ್ ಪಂದ್ಯದ ವೇಳೆ ಟ್ರಿನ್ ಬಾಗೋ ನೈಟ್ ರೈಡರ್ಸ್ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಕಾಣಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮುಂದೆ ಕ್ಷಮೆಯಾಚಿಸಿದ್ದಾರೆ.


 
ಬಾಲಿವುಡ್ ನಟ ಶಾರುಖ‍್ ಖಾನ್ ಒಡೆತನದ ನೈಟ್ ರೈಡರ್ಸ್ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಕಾಣಿಸಿಕೊಂಡ ಫೋಟೋಗಳು ಬಿಸಿಸಿಐಗೆ ಸಿಕ್ಕಿತ್ತು. ಒಪ್ಪಿಗೆಯಿಲ್ಲದೇ ವಿದೇಶೀ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಕ್ಕೆ ದಿನೇಶ್ ಕಾರ್ತಿಕ್ ವಿರುದ್ಧ ಬಿಸಿಸಿಐ ವಿವರಣೆ ಕೇಳಿತ್ತು.
 
ಇದಕ್ಕೆ ಉತ್ತರಿಸಿರುವ ದಿನೇಶ್ ಕಾರ್ತಿಕ್ ‘ಬಿಸಿಸಿಐ ಅನುಮತಿ ಪಡೆಯದೇ ಹೋಗಿರುವುದಕ್ಕೆ ಬೇಷರತ್ ಕ್ಷಮೆಯಾಚಿಸುತ್ತೇನೆ. ಟ್ರಿನ್ ಬಾಗೋ ತಂಡದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ. ಈ ತಂಡದ ಜತೆಗೆ ನನಗೆ ಯಾವುದೇ ಸಂಬಂಧವಿಲ್ಲ. ಡ್ರೆಸ್ಸಿಂಗ್ ರೂಂನಲ್ಲಿ ಇದ್ದಿದ್ದು ನಿಜ. ಆದರೆ ಮುಂದಿನ ಪಂದ್ಯಗಳಿಗಾಗಿ ಕಾದು ಕುಳಿತಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೆಸ್ಟ್ ನಿಂದ ಕೆಎಲ್ ರಾಹುಲ್ ಕಿತ್ತೊಗೆಯಲು ಮತ್ತೊಬ್ಬ ಮಾಜಿ ಕ್ರಿಕೆಟಿಗನ ಒತ್ತಾಯ

ಮುಂಬೈ: ನಿರೀಕ್ಷಿತ ಪ್ರದರ್ಶನ ನೀಡದ ಕಾರಣಕ್ಕ ಕನ್ನಡಿಗ ಕೆಎಲ್ ರಾಹುಲ್ ರನ್ನು ಟೆಸ್ಟ್ ತಂಡದಿಂದ ಕೈ ಬಿಡಲು ...

news

ಗೃಹಹಿಂಸೆ ಪ್ರಕರಣ: ಇನ್ನೂ ಭಾರತಕ್ಕೆ ಮರಳದ ಕ್ರಿಕೆಟಿಗ ಮೊಹಮ್ಮದ್ ಶಮಿ

ಕೋಲ್ಕೊತ್ತಾ: ಪತ್ನಿಗೆ ಗೃಹಹಿಂಸೆ ನೀಡಿದ ಪ್ರಕರಣದಲ್ಲಿ ಕೋಲ್ಕೊತ್ತಾದ ಸ್ಥಳೀಯ ನ್ಯಾಯಾಲಯದಿಂದ ಬಂಧನ ...

news

ಹಳೆಯ ಎದುರಾಳಿಯಿಂದ ವಿರಾಟ್ ಕೊಹ್ಲಿಗೆ ಹೊಸ ಸವಾಲು

ಮುಂಬೈ: ಸಮಕಾಲೀನ ಕ್ರಿಕೆಟಿಗರ ಪೈಕಿ ಈಗ ಜಾಗತಿಕವಾಗಿ ಕ್ರಿಕೆಟ್ ಲೋಕದಲ್ಲಿ ಇಬ್ಬರು ಸರಿಸಮಾನ ಸ್ಪರ್ಧಿಗಳು ...

news

ಆಶಸ್ ನಲ್ಲಿ ಏಕಾಂಗಿ ಹೋರಾಟ ನಡೆಸಿ ದ್ವಿಶತಕ ಸಿಡಿಸಿದ ಸ್ಟೀವ್ ಸ್ಮಿತ್

ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ...