ರಾಜ್ ಕೋಟ್: ದ.ಆಫ್ರಿಕಾ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತಂಡದ ಗೆಲುವಿನ ರೂವಾರಿಯಾದ ಪಂದ್ಯಶ್ರೇಷ್ಠ ದಿನೇಶ್ ಕಾರ್ತಿಕ್ ಕೋಚ್ ದ್ರಾವಿಡ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.ಪಂದ್ಯದ ಬಳಿಕ ಪ್ರಶಸ್ತಿ ಸ್ವೀಕರಿಸುವಾಗ ಮಾತನಾಡಿದ ದಿನೇಶ್ ಕಾರ್ತಿಕ್ ಡ್ರೆಸ್ಸಿಂಗ್ ರೂಂನಲ್ಲಿ ಈಗಿರುವ ವಾತಾವರಣಕ್ಕೆ ಕೋಚ್ ರಾಹುಲ್ ದ್ರಾವಿಡೇ ಕಾರಣ ಎಂದಿದ್ದಾರೆ.‘ಮೂರು ಮತ್ತು ನಾಲ್ಕನೇ ಪಂದ್ಯದಲ್ಲಿ ಒತ್ತಡವನ್ನು ಅರಗಿಸಿಕೊಂಡ ನಮ್ಮ ಪರಿ ನಿಜಕ್ಕೂ ಮೆಚ್ಚುವಂತದ್ದು. ಇದಕ್ಕೆಲ್ಲಾ ಕಾರಣ ಕೋಚ್ ರಾಹುಲ್ ದ್ರಾವಿಡ್. ಡ್ರೆಸ್ಸಿಂಗ್