ನವದೆಹಲಿ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಕಳೆದ ಕೆಲವು ಸಮಯಗಳಿಂದ ಶತಕವನ್ನೇ ಸಿಡಿಸಿಲ್ಲ. ಈ ಕಾರಣಕ್ಕೆ ಅವರು ಸಾಕಷ್ಟು ಟೀಕೆಗೊಳಗಾಗುತ್ತಾರೆ.ಈ ಬಗ್ಗೆ ಸ್ಪಿನ್ನರ್ ಯಜುವೇಂದ್ರ ಚಾಹಲ್ ಪ್ರತಿಕ್ರಿಯಿಸಿದ್ದಾರೆ. ಕೊಹ್ಲಿ ಶತಕ ಗಳಿಸಿಲ್ಲ ಎಂಬುದನ್ನಷ್ಟೇ ನೋಡಬೇಡಿ. ಅವರು ತಂಡಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಎಂದು ಚಾಹಲ್ ಹೇಳಿದ್ದಾರೆ.‘ಅವರು 60-70 ರನ್ ಮೂಲಕ ತಂಡಕ್ಕೆ ನೀಡಿರುವ ಉಪಯುಕ್ತ ಕೊಡುಗೆಯನ್ನು ನಾವು ನೋಡುವುದೇ ಇಲ್ಲ. ಅವರು ಶತಕ ಗಳಿಸಿಲ್ಲ ಎಂಬುದನ್ನಷ್ಟೇ ನೋಡುತ್ತಿದ್ದೇವೆ.