ಎಡ್ಜ್ ಬಾಸ್ಟನ್: ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದಕ್ಕೆ ಇಂಗ್ಲೆಂಡ್ ಅಭಿಮಾನಿಗಳು ಭಾರತೀಯ ಪ್ರೇಕ್ಷಕರನ್ನು ಮೂದಲಿಸಿದ್ದಾರೆ. ಮೂರನೇ ದಿನ ವಿರಾಟ್ ಕೊಹ್ಲಿ ಭಾರತದ ಗೆಲುವಿನ ಏಕೈಕ ಭರವಸೆಯ ಆಶಾಕಿರಣವಾಗಿದ್ದರು. ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್ ನಲ್ಲೂ ಏಕಾಂಗಿಯಾಗಿ ಹೋರಾಡಿದ್ದನ್ನು ನೋಡಿ ಭಾರತೀಯ ಬೆಂಬಲಿಗರು ಮೈದಾನದಲ್ಲೂ ಅವರ ಪರವಾಗಿ ಘೋಷಣೆ ಕೂಗುತ್ತಿದ್ದರು.ಆದರೆ ದುರದೃಷ್ಟವಶಾತ್ ಕೊಹ್ಲಿಗೆ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗಲಿಲ್ಲ. ಹೀಗಾಗಿ ಸೋತ ಬಳಿಕ ಸಪ್ಪೆಯಾಗಿ