ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು 368 ರನ್ ಗಳ ಗೆಲುವಿನ ಗುರಿ ನೀಡಿ ಆತ್ಮವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ಅತಿಥೇಯ ಬ್ಯಾಟ್ಸ್ ಮನ್ ಗಳು ತಕ್ಕ ಸವಾಲೊಡ್ಡಿದ್ದಾರೆ. ಇಂಗ್ಲೆಂಡ್ ನಿನ್ನೆಯ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 77 ರನ್ ಗಳಿಸಿದೆ. ಆರಂಭಿಕರಾದ ಹಸೀಬ್ ಹಮೀದ್ 43, ರೋರಿ ಬರ್ನ್ಸ್ 31 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದೀಗ ಇಂಗ್ಲೆಂಡ್ ಗೆ ಅಂತಿಮ ದಿನವಾದ ಇಂದು 291