ಲೀಗ್ ಪಂದ್ಯದಲ್ಲಿಯೇ ಇಂಗ್ಲೆಂಡ್ ವಿಶ್ವಕಪ್ ಯಾತ್ರೆ ಕೊನೆಯಾಗುತ್ತಾ?!

ಲಂಡನ್, ಬುಧವಾರ, 26 ಜೂನ್ 2019 (11:43 IST)

ಲಂಡನ್: ವಿಶ್ವಕಪ್ ಕೂಟದಲ್ಲಿ ಅತಿಥೇಯ ತಂಡವಾಗಿದ್ದುಕೊಂಡು ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಇಂಗ್ಲೆಂಡ್ ಹೋರಾಟ ಲೀಗ್ ಹಂತದಲ್ಲಿಯೇ ಕೊನೆಯಾಗುವ ಭೀತಿಯಲ್ಲಿದೆ.


 
ಇಂಗ್ಲೆಂಡ್ ಇದುವರೆಗೆ ಆಡಿದ 7 ಪಂದ್ಯಗಳಿಂದ 4 ಗೆಲುವು 3 ಸೋಲುಗಳೊಂದಿಗೆ 8 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇತ್ತ ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳೂ ಇಂಗ್ಲೆಂಡ್ ಸ್ಥಾನ ಕಬಳಿಸಲು ಹವಣಿಸುತ್ತಿವೆ.
 
ಇದೀಗ ಅತಿಥೇಯ ತಂಡಕ್ಕೆ ಉಳಿದ ಎರಡೂ ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಎದುರಾಗಿದೆ. ಇವುಗಳ ಪೈಕಿ ಒಂದು ಬಲಿಷ್ಠ ಟೀಂ ಇಂಡಿಯಾ ವಿರುದ್ಧದ ಪಂದ್ಯವಾಗಿದೆ. ಒಂದು ವೇಳೆ ಆ ಪಂದ್ಯ ಸೋತು ಇನ್ನೊಂದು ಗೆದ್ದರೆ ರನ್ ಸರಾಸರಿಯ ಆಧಾರದಲ್ಲಿ ಅದೃಷ್ಟವಿದ್ದರೆ ಸೆಮಿಫೈನಲ್ ಗೇರಬಹುದು. ನಿನ್ನೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 64 ರನ್ ಗಳ ಹೀನಾಯ ಸೋಲು ಅನುಭವಿಸಿದ ಇಂಗ್ಲೆಂಡ್ ಈ ಸಂಕಷ್ಟಕ್ಕೆ ಸಿಲುಕಿದೆ. ಅತ್ತ ಆಸೀಸ್ ಮೊದಲ ತಂಡವಾಗಿ ಸೆಮಿಫೈನಲ್ ಗೇರಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ಕ್ರಿಕೆಟ್ 2019: ವಿರಾಟ್ ಕೊಹ್ಲಿಗೆ ಇಂದು ವಿಶ್ವದಾಖಲೆ ಮಾಡುವ ಅವಕಾಶ

ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ಇಂದು ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ...

news

ಹೃದಯ ತೊಂದರೆಯಿಂದ ಮುಂಬೈ ಆಸ್ಪತ್ರೆಗೆ ದಾಖಲಾದ ಬ್ರಿಯಾನ್ ಲಾರಾ ಸ್ಥಿತಿ ಈಗ ಹೇಗಿದೆ ಗೊತ್ತಾ?

ಮುಂಬೈ: ವೆಸ್ಟ್ ಇಂಡೀಸ್ ನ ಕ್ರಿಕೆಟ್ ದೈತ್ಯ ಬ್ರಿಯಾನ್ ಲಾರಾ ಹೃದಯ ತೊಂದರೆಗೊಳಗಾಗಿ ನಿನ್ನೆ ಮುಂಬೈನ ...

news

ವಿಶ್ವಕಪ್ ಕ್ರಿಕೆಟ್ 2019: ಟೀಂ ಇಂಡಿಯಾಗೆ ಇಂದು ಅಚ್ಚರಿ ಫಲಿತಾಂಶ ನೀಡುವ ವಿಂಡೀಸ್ ಎದುರಾಳಿ

ಲಂಡನ್: ವಿಶ್ವಕಪ್ 2019 ರ ಕಣದಲ್ಲಿ ಇಂದು ಟೀಂ ಇಂಡಿಯಾ ವೆಸ್ಟ್ ಇಂಡೀಸ್ ನ್ನು ಎದುರಿಸಲಿದೆ. ಹಲವು ಅಚ್ಚರಿ ...

news

ಧೋನಿ ಬಗ್ಗೆ ಹೇಳಿಕೆ ನೀಡಿದ ಸಚಿನ್ ವಿರುದ್ಧ ಅಭಿಮಾನಿಗಳು ಗರಂ

ಲಂಡನ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಕ್ಯಾಪ್ಟನ್ ಕೂಲ ಬ್ಯಾಟಿಂಗ್ ಶೈಲಿಯ ಬಗ್ಗೆ ನೀಡಿದ ...