ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಮಳೆಯ ನಡುವೆ ಇಂಗ್ಲೆಂಡ್ ನ ಸೌಥಾಂಪ್ಟನ್ ನಲ್ಲಿ ನಡೆಸಿ ಅವಾಂತರ ಮಾಡಿದ ಐಸಿಸಿ ಮೇಲೆ ಮಾಜಿ ಕ್ರಿಕೆಟಿಗರು ಗರಂ ಆಗಿದ್ದಾರೆ.ಪ್ರತಿಷ್ಠಿತ ಐಸಿಸಿ ಟೂರ್ನಿಯ ಫೈನಲ್ ಪಂದ್ಯ, ಅದರಲ್ಲೂ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಪಂದ್ಯವನ್ನು ಇಂತಹ ತಾಣದಲ್ಲಿ ನಡೆಸಿರುವುದು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಟೆಸ್ಟ್ ಕ್ರಿಕೆಟ್ ನ ರೋಚಕತೆ ಹೆಚ್ಚಿಸುವ ಸಲುವಾಗಿಯೇ ಈ