ಮುಂಬೈ: ಒಂದು ಕಾಲದಲ್ಲಿ ವಿಕಲಚೇತನ ಟೀಂ ಇಂಡಿಯಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಕ್ರಿಕೆಟಿಗ ದಿನೇಶ್ ಸೈನ್ ಇಂದು ನಾಡಾ ಸಂಸ್ಥೆಯಲ್ಲಿ ಪ್ಯೂನ್ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಪೊಲಿಯೋ ಪೀಡಿತರಾಗಿರುವ ದಿನೇಶ್ ವಿಕಲಚೇತನರ ತಂಡವನ್ನು ಪ್ರತಿನಿಧಿಸಿದ್ದರು. ಭಾರತ ತಂಡದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ ಈಗ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಕ್ರಿಕೆಟಿಗ ಕುಟುಂಬ ನಿರ್ವಹಣೆಗಾಗಿ ಕೆಲಸ ನೀಡುವಂತೆ ನಾಡಾ ಸಂಸ್ಥೆಗೆ ಅರ್ಜಿ ಸಲ್ಲಿಸಿದ್ದಾರೆ.35 ವರ್ಷದ ದಿನೇಶ್ ಓದಿದ್ದು ಕೇವಲ 12 ನೇ ತರಗತಿವರೆಗೆ