ಡಿಆರ್ ಎಸ್ ಬೇಡ ಎಂದ ಧೋನಿ ಮೇಲೆ ಅಭಿಮಾನಿಗಳ ಸಿಟ್ಟು

ಲಂಡನ್, ಸೋಮವಾರ, 1 ಜುಲೈ 2019 (09:38 IST)

ಲಂಡನ್: ವಿಕೆಟ್ ಕೀಪರ್ ಧೋನಿ ಡಿಆರ್ ಎಸ್ ನಿಯಮ ತೆಗೆದುಕೊಳ್ಳಬೇಕೋ ಬೇಡವೋ ಎಂದು ಕರಾರುವಾಕ್ ಆಗಿ ನಿರ್ಣಯಿಸುವ ಆಟಗಾರ ಎಂದೇ ಖ್ಯಾತಿ. ಆದರೆ ಧೋನಿ ಕೂಡಾ ಕೆಲವೊಮ್ಮೆ ತಪ್ಪು ಮಾಡುತ್ತಾರೆ.


 
ನಿನ್ನೆ ಇಂಗ್ಲೆಂಡ್ ವಿರುದ್ಧ ಧೋನಿ ಮಾಡಿದ ಇಂತಹದ್ದೇ ಒಂದು ತಪ್ಪಿಗಾಗಿ ಅಭಿಮಾನಿಗಳು ಟ್ವಿಟರ್ ನಲ್ಲಿ ಅವರ ವಿರುದ್ಧ ಸಿಟ್ಟು ಪ್ರದರ್ಶಿಸಿದ್ದಾರೆ. ಇಂಗ್ಲೆಂಡ್ ಆರಂಭಿಕ ಜೇಸನ್ ರಾಯ್ ವಿರುದ್ಧ ಡಿಆರ್ ಎಸ್ ತೆಗೆದುಕೊಳ್ಳದೇ ಇರುವಂತೆ ಧೋನಿ ಸಲಹೆ ನೀಡಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
 
ಜೇಸನ್ ರಾಯ್ ಬೌಲಿಂಗ್ ನಲ್ಲಿ ಧೋನಿ ವಿಕೆಟ್ ಹಿಂದುಗಡೆ ಕ್ಯಾಚ್ ಪಡೆದಿದ್ದರು. ಆದರೆ ಅಂಪಾಯರ್ ಇದನ್ನು ಪುರಸ್ಕರಿಸಲಿಲ್ಲ. ಆದರೆ ರಿವ್ಯೂ ನೋಡಿದಾಗ ಬಾಲ್ ರಾಯ್ ಗ್ಲೌಸ್ ಗೆ ತಗುಲಿದ್ದು ಸ್ಪಷ್ಟವಾಗಿತ್ತು.
 
ಕೊಹ್ಲಿ ಧೋನಿ ಮಾತು ಕೇಳಬಾರದಿತ್ತು. ಅಷ್ಟೇ ಅಲ್ಲ, ಕೆಲವರು ಧೋನಿಯನ್ನು ಎಲ್ಲರೂ ಅತಿಯಾಗಿ ತಲೆ ಮೇಲೆ ಕೂರಿಸುತ್ತಿರುವುದು ಯಾಕೆ? ಅವರೇನು ದೇವರಾ? ಎಂದೆಲ್ಲಾ ಸಿಟ್ಟು ಹೊರ ಹಾಕಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಗಾಯಮಾಡಿಕೊಂಡ ಕೆಎಲ್ ರಾಹುಲ್

ಲಂಡನ್: ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಫೀಲ್ಡಿಂಗ್ ವೇಳೆ ಕ್ಯಾಚ್ ...

news

ವಿಶ್ವಕಪ್ 2019: ಟೀಂ ಇಂಡಿಯಾ ಸೋಲಿಗೆ ಕಾರಣರಾದ ಧೋನಿ-ಕೇದಾರ್ ಜಾಧವ್! ಅಭಿಮಾನಿಗಳ ಆಕ್ರೋಶ

ಲಂಡನ್: ವಿಶ್ವಕಪ್ ಕೂಟದಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾಗೆ ನಿನ್ನೆಯ ಪಂದ್ಯದಲ್ಲಿ ...

news

ವಿಶ್ವಕಪ್ 2019: ಟೀಂ ಇಂಡಿಯಾ ಬೌಲರ್ ಗಳ ಚೆಂಡಾಡಿದ ಇಂಗ್ಲೆಂಡ್

ಲಂಡನ್: ಯೋಜಿತವಲ್ಲದ ಬೌಲಿಂಗ್, ಕಳಪೆ ಫೀಲ್ಡಿಂಗ್ ನ ಭರಪೂರ ಲಾಭವೆತ್ತಿರುವ ಅತಿಥೇಯ ಇಂಗ್ಲೆಂಡ್ ಟೀಂ ...

news

ವಿಜಯ್ ಶಂಕರ್ ಗೆ ಕೊಕ್ ಕೊಡಿ ಎಂದು ರವಿಶಾಸ್ತ್ರಿ, ವಿರಾಟ್ ಕೊಹ್ಲಿಗೆ ಮನವಿ ಮಾಡಿದ ಕೆವಿನ್ ಪೀಟರ್ಸನ್

ಲಂಡನ್: ಟೀಂ ಇಂಡಿಯಾದಲ್ಲಿ ಇದೀಗ ಕಳಪೆ ಪ್ರದರ್ಶನದಿಂದಾಗಿ ಆಲ್ ರೌಂಡರ್ ವಿಜಯ್ ಶಂಕರ್ ಸಾಕಷ್ಟು ...