ಮುಂಬೈ: ಧೋನಿಗೆ ವಿಶ್ರಾಂತಿ ನೀಡಿ ಟೀಂ ಇಂಡಿಯಾಗೆ ಹೊಸ ವಿಕೆಟ್ ಕೀಪರ್ ನನ್ನು ತಯಾರು ಮಾಡಲು ರಿಷಬ್ ಪಂತ್ ಗೆ ಎಷ್ಟೇ ಅವಕಾಶ ಕೊಟ್ಟರೂ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಇದನ್ನು ನೋಡಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದಕ್ಕೂ ಮೊದಲು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಾಗಲೀ ಇದೀಗ ನಡೆಯುತ್ತಿರುವ ದ.ಆಫ್ರಿಕಾ ವಿರುದ್ಧದ ಟಿ20 ಸರಣಿಯಾಗಲಿ ರಿಷಬ್ ಪಂತ್ ಕಳಪೆ ಬ್ಯಾಟಿಂಗ್ ಮುಂದುವರಿದಿದೆ. ಅವರು ಸುಧಾರಿಸುವ ಲಕ್ಷಣವೇ ತೋರದಿರುವುದನ್ನು ನೋಡಿ ಟ್ವಿಟರಿಗರು