ಲಂಡನ್: ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಅದ್ಯಾವುದೇ ವೇದಿಕೆಯಲ್ಲಿ ಎದುರಾಗಲಿ. ಕುತೂಹಲದ ಕಣ್ಣುಗಳು ಅವರನ್ನೇ ಹಿಂಬಾಲಿಸುತ್ತಿರುತ್ತವೆ. ಹಾಗೆಯೇ ಇಂದು ನಡೆಯಲಿರುವ ಭಾರತ-ಪಾಕ್ ಕ್ರಿಕೆಟ್ ಪಂದ್ಯವನ್ನು ಐಸಿಸಿಯ ಪ್ರತಿಷ್ಠಿತ ಟೂರ್ನಿ ಎನ್ನುವುದಕ್ಕಿಂತ ಅಭಿಮಾನಿಗಳು ಇನ್ನೇನೋ ಹುಡುಕುತ್ತಿರುತ್ತಾರೆ. ಈ ಪಂದ್ಯಕ್ಕೆ ಆಟಗಾರರಿಗಿಂತ ಅಭಿಮಾನಿಗಳಿಗೇ ಹೆಚ್ಚು ಸಂಭ್ರಮ, ಆತಂಕ. ನಮಗೆ ಇದು ಒಂದು ಸಾಮಾನ್ಯ ಪಂದ್ಯವಷ್ಟೇ ಎಂದು ಭಾರತೀಯ ಕ್ರಿಕೆಟಿಗರು ಯಾವತ್ತೂ ಹೇಳುತ್ತಿರುತ್ತಾರೆ. ಮೊನ್ನೆಯಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ