ದುಬೈ: ಐಪಿಎಲ್ 14 ಮುಗಿದ ತಕ್ಷಣ ಟಿ20 ವಿಶ್ವಕಪ್ ಕೂಟ ಯುಎಇ ಅಂಗಣದಲ್ಲಿ ನಡೆಯಲಿದೆ. ಅದರಲ್ಲೂ ಭಾರತ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪಂದ್ಯವಾಡಲಿದೆ. ಈ ಪಂದ್ಯ ಅಕ್ಟೋಬರ್ 24 ರಂದು ನಡೆಯಲಿದೆ. ಐಸಿಸಿ ಟೂರ್ನಿಗಳಲ್ಲಿ ಮಾತ್ರ ಈ ಎರಡು ತಂಡಗಳು ಮುಖಾಮುಖಿಯಾಗುತ್ತವೆ. ಅದರಲ್ಲೂ ಭಾರತ-ಪಾಕ್ ಪಂದ್ಯವೆಂದರೆ ಫೈನಲ್ ಗಿಂತ ಹೆಚ್ಚು ಆವೇಶವಿರುತ್ತದೆ.ಇದೀಗ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ