ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ತಂಡ ಪ್ರಕಟಿಸಲಾಗಿದ್ದು, ಆಟಗಾರರ ಲಿಸ್ಟ್ ನೋಡಿ ಅಭಿಮಾನಿಗಳು ಗರಂ ಆಗಿದ್ದಾರೆ.ಆಡುವ 11 ರ ಬಳಗದ ಪಟ್ಟಿಯನ್ನು ಟೀಂ ಇಂಡಿಯಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಅಚ್ಚರಿಯೆಂಬಂತೆ ಫಾರ್ಮ್ ನಲ್ಲಿರುವ ಕೆಎಲ್ ರಾಹುಲ್ ಮತ್ತು ಶಬ್ನಂ ಗಿಲ್ ರನ್ನು ಕಡೆಗಣಿಸಿ ಪೃಥ್ವಿ ಶಾಗೆ ಆರಂಭಿಕ ಸ್ಥಾನಕ್ಕೆ ಮಣೆ ಹಾಕಿರುವುದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಶಾ ಅಭ್ಯಾಸ ಪಂದ್ಯದಲ್ಲೂ ವಿಫಲರಾಗಿದ್ದರು.