ಲಂಡನ್: ಕೊರೋನಾ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜಿಸಿದ ಹೆಗ್ಗಳಿಕೆಗೆ ಪಾತ್ರವಾದ ಇಂಗ್ಲೆಂಡ್ ಈಗ ಮತ್ತೊಂದು ಗರಿ ಮುಡಿಗೇರಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಮೈದಾನದಲ್ಲಿ ಪ್ರೇಕ್ಷಕರಿಗೆ ಪಂದ್ಯ ನೋಡಲು ನೇರ ಅವಕಾಶ ನೀಡುವ ಮೂಲಕ ಕೊರೋನಾ ಬಳಿಕ ಕ್ರಿಕೆಟ್ ಆರಂಭಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಿಟ್ಟಿದೆ.ಸರ್ರೆ ಮತ್ತು ಮಿಡ್ಲ್ ಎಸೆಕ್ಸ್ ನಡುವಿನ ಕೌಂಟಿ ಪಂದ್ಯದಲ್ಲಿ ಇಂಗ್ಲೆಂಡ್ 1000 ಪ್ರೇಕ್ಷಕರಿಗೆ ಮೈದಾನದಲ್ಲಿ ಉಪಸ್ಥಿತರಿರಲು ಅವಕಾಶ ನೀಡಿದೆ. ಈ ಮೂಲಕ ಮಾರ್ಚ್ ಬಳಿಕ