ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಎಲ್ಲಿಯೇ ಪಂದ್ಯ ನಡೆಯಲಿ. ಅಭಿಮಾನಿಗಳು ಅದೇನೋ ಆಗಿ ಹೋಗುತ್ತದೆಂಬ ಆತಂಕದಿಂದ ಪೂಜೆ ಸಲ್ಲಿಸುತ್ತಾರೆ. ಅಭಿಮಾನಿಗಳ ಈ ಅತಿರೇಕದ ವರ್ತನೆಯಿಂದಲೇ ಈ ಪಂದ್ಯಕ್ಕೆ ಇಷ್ಟೊಂದು ಕಳೆ ಬರುತ್ತದೆ. ನಿನ್ನೆಯಿಂದಲೇ ರಾಜ್ಯದ ವಿವಿದೆಡೆ ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಧಾರವಾಡ, ಮೈಸೂರಿನಲ್ಲಿ ವಿವಿಧ ಸಂಘಟನೆಯ ಕಾರ್ಯಕರ್ತರು ಬ್ಯಾಟ್, ಬಾಲ್, ಭಾರತದ ರಾಷ್ಟ್ರ ಧ್ವಜವನ್ನು ದೇವರ ಮುಂದಿಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.ಟೀಂ ಇಂಡಿಯಾ ಗೆದ್ದು ಬಾ.