ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ 2018 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ಇಂದು ರಾತ್ರಿ ನಡೆಯಲಿದ್ದು, ವಿಶ್ವದಾದ್ಯಂತ ಫುಟ್ಬಾಲ್ ಫಿವರ್ ಜೋರಾಗಿದೆ.ಫ್ರಾನ್ಸ್ ಮತ್ತು ಕ್ರೊವೇಷಿಯಾ ನಡುವೆ ಇಂದು ರಾತ್ರಿ 8.30 ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು, ಭಾರತದಲ್ಲೂ ಅಭಿಮಾನಿಗಳು, ಚಿತ್ರತಾರೆಯರು, ಕ್ರೀಡಾ ತಾರೆಯರು ತಮ್ಮ ಮೆಚ್ಚಿನ ತಂಡಕ್ಕೆ ಶುಭ ಕೋರುತ್ತಿದ್ದಾರೆ.ಕ್ರೊವೇಷಿಯಾ ಮತ್ತು ಫ್ರಾನ್ಸ್ ಕಳೆದ ಬಾರಿ ವಿಶ್ವಕಪ್ ನಲ್ಲಿ ಎದುರಾಗಿದ್ದು 20 ವರ್ಷಗಳ ಹಿಂದೆ. ಅಂದರೆ 1998 ಫುಟ್ಬಾಲ್