ನವದೆಹಲಿ: 2018 ಫಿಫಾ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿ ಇಂದಿನಿಂದ ರಷ್ಯಾದಲ್ಲಿ ಆರಂಭವಾಗಲಿದೆ. ಜಗತ್ತಿನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ ಬಗ್ಗೆ ಭಾರತದಲ್ಲೂ ಕ್ರೇಜ್ ಇದೆ.ಮೊದಲ ಪಂದ್ಯದಲ್ಲಿ ಅತಿಥೇಯ ರಷ್ಯಾ, ಸೌದಿ ಅರೇಬಿಯಾವನ್ನು ಎದುರಿಸಲಿದೆ. ಭಾರತದ ಕಾಲಮಾನ ಪ್ರಕಾರ ಈ ಪಂದ್ಯ ರಾತ್ರಿ 8.30 ಕ್ಕೆ ಆರಂಭವಾಗಲಿದೆ.ಒಟ್ಟು 32 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಒಟ್ಟು 12 ಸ್ಥಳಗಳಲ್ಲಿ 64 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ನಡೆಯುವ ಮಾಸ್ಕೋದ ಮೈದಾನದಲ್ಲಿ