ಬೆಂಗಳೂರು: ಕೊನೆಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಎಷ್ಟೋ ದಿನಗಳಿಂದ ಮರೀಚಿಕೆಯಾಗಿದ್ದ ಟೀಂ ಇಂಡಿಯಾ ಸೇರುವ ಕನಸು ಇದೀಗ ನನಸಾಗಿದೆ.ವಿಶೇಷವೆಂದರೆ ಈ ಬಾರಿ ವೆಸ್ಟ್ ಇಂಡೀಸ್ ಸರಣಿಗೆ ಘೋಷಣೆ ಮಾಡಿರುವ ಟೀಂ ಇಂಡಿಯಾದಲ್ಲಿ ಮೂವರು ಕನ್ನಡಿಗ ಬ್ಯಾಟ್ಸ್ ಮನ್ ಗಳಿದ್ದಾರೆ. ಅದರಲ್ಲೂ ಮಯಾಂಕ್ ಮತ್ತು ಕೆಎಲ್ ರಾಹುಲ್ ಕುಚಿಕು ಗೆಳೆಯರು.ವೃತ್ತಿ ಜೀವನಕ್ಕೂ ಮೀರಿ ಖಾಸಗಿ ಬದುಕಿನಲ್ಲೂ ಇವರಿಬ್ಬರೂ ಖಾಸಾ ದೋಸ್ತುಗಳು. ಈಗ ಈ ಇಬ್ಬರೂ ಕುಚಿಕುಗಳು