Widgets Magazine

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಇನ್ಮೇಲೆ ಅರುಣ್ ಜೇಟ್ಲಿ ಹೆಸರು

ನವದೆಹಲಿ| Krishnaveni K| Last Modified ಬುಧವಾರ, 28 ಆಗಸ್ಟ್ 2019 (09:19 IST)
ನವದೆಹಲಿ: ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಬಿಜೆಪಿ ಹಿರಿಯ ನಾಯಕ, ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದ  ಅರುಣ್ ಜೇಟ್ಲಿ ಹೆಸರಿನಲ್ಲಿ ಮರುನಾಮಕರಣಗೊಳ್ಳಲಿದೆ.

 
ದೆಹಲಿಯಿಂದ ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ರಂತಹ ಸ್ಟಾರ್ ಆಟಗಾರರನ್ನು ದೇಶಕ್ಕೆ ನೀಡುವಲ್ಲಿ ಅರುಣ್ ಜೇಟ್ಲಿ ಪ್ರೋತ್ಸಾಹ ದೊಡ್ಡದು. ಹೀಗಾಗಿ ಜೇಟ್ಲಿ ಹೆಸರಿನಿಂದ ಮೈದಾನವನ್ನು ಮರುನಾಮಕರಣ ಮಾಡಲಾಗುತ್ತಿದೆ.
 
ಸೆಪ್ಟೆಂಬರ್ 12 ರಂದು ಈ ಕಾರ್ಯಕ್ರಮ ನಡೆಯಲಿದೆ. ಅಷ್ಟೇ ಅಲ್ಲ, ದೆಹಲಿ ಮೈದಾನದ ನವೀರಕಣ ಕೆಲಸದಲ್ಲೂ ಜೇಟ್ಲಿ ಕೊಡುಗೆ ಅಪಾರ. ಹೀಗಾಗಿ ಅಗಲಿದ ನಾಯಕನಿಗೆ ಗೌರವ ಸಲ್ಲಿಸಲಾಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :